Asianet Suvarna News Asianet Suvarna News

ಜನರಿಗೆ ವಾಸ್ತವ ಬೇಡ, ಮನರಂಜನೆ ಸಾಕು... ನನ್ನ ಸಿನಿಮಾದಲ್ಲಿ ಧರ್ಮಕ್ಕೆ ಜಾಗವಿಲ್ಲ: ಫಹಾದ್‌ ಫಾಸಿಲ್‌

ಜನರಿಗೆ ವಾಸ್ತವ ಬೇಡ, ಮನರಂಜನೆ ಸಾಕು. ಅದಕ್ಕಾಗಿಯೇ ನನ್ನ ಸಿನಿಮಾದಲ್ಲಿ ಧರ್ಮಕ್ಕೆ ಜಾಗವಿಲ್ಲ ಎಂದಿದ್ದಾರೆ ಖ್ಯಾತ ಮಾಲಿವುಡ್​ ನಟ ಫಹಾದ್‌ ಫಾಸಿಲ್‌. ಏನಿದರ ಮರ್ಮ?
 

Fahadh Faasil admits he wont touch religion in Malayalam films People dont want to hear reality suc
Author
First Published Apr 25, 2024, 4:27 PM IST

"ಕೇರಳದಲ್ಲಿ ಧರ್ಮದೊಂದಿಗೆ ವ್ಯವಹರಿಸುವ ಬಗ್ಗೆ ನನ್ನ ಮಿತಿ ಗೊತ್ತಿದೆ. ನಾನು ಸಿನಿಮಾದಲ್ಲಿ ಹೇಳಿದ ಮಾತ್ರಕ್ಕೆ ಕಟುವಾದ ವಾಸ್ತವವನ್ನು ಜನರು ಅರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅವರು ಮನರಂಜನೆಯನ್ನು ಬಯಸುತ್ತಾರೆ. ಹಾಗಾಗಿಯೇ ಮಲಯಾಳಂ ಚಿತ್ರಗಳಲ್ಲಿ ನಾನು ಧರ್ಮವನ್ನು ಮುಟ್ಟುವುದಿಲ್ಲ" ಎಂದು ಮಾಲಿವುಡ್​ನ ಖ್ಯಾತ ನಟ ಫಹಾದ್ ಫಾಸಿಲ್ ಹೇಳಿದ್ದಾರೆ. ಇವರ ಈ ಹೇಳಿಕೆ ಹಲವರಲ್ಲಿ ಅಚ್ಚರಿ ಮೂಡಿಸಿದ್ದು ನಟ ಹೀಗೇಕೆ ಹೇಳಿದರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂದಹಾಗೆ  ಫಹಾದ್‌ ಫಾಸಿಲ್‌, ತಮ್ಮ ನಟನೆ ಮೂಲಕವೇ  ಮಲಯಾಳಂ ಮಾತ್ರವಲ್ಲದೇ ದಕ್ಷಿಣದ  ಸಿನಿಮಾರಂಗದಲ್ಲಿಯೂ ಮಿಂಚುತ್ತಿರುವ ಕಲಾವಿದ.  ಸೀಮಿತ ಶೈಲಿಯ ಸಿನಿಮಾಗಳಿಗೆ ಅಂಟಿಕೊಳ್ಳದ ಇವರು,   ಅಪಾರ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದಾರೆ. ಇದರ ನಡುವೆ ಇವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
 
ಅಷ್ಟಕ್ಕೂ ಫಹಾದ್ ಫಾಸಿಲ್ ಈ ಬಗ್ಗೆ ಮಾತನಾಡಲು ಕಾರಣ, 2020ರಲ್ಲಿ ತೆರೆಕಂಡ ತೆರೆ ಕಂಡ 'ಟ್ರಾನ್ಸ್' ಸಿನಿಮಾ. ಪುಷ್ಪ ಸಿನಿಮಾ ಮೂಲಕ ಹೆಚ್ಚು ಮುನ್ನೆಲೆಯ ಜತೆಗೆ ಸದ್ದು ಮಾಡಿದ ನಟ ಫಹಾದ್‌ ಫಾಸಿಲ್‌, ಸದ್ಯ ಆವೇಶಂ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ಜೀತು ಮಾಧವನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಏ. 11ರಂದು ಬಿಡುಗಡೆಯಾಗಿತ್ತು. ಆದ್ರೆ ಟ್ರಾನ್ಸ್​ ಸಿನಿಮಾ ಹೆಚ್ಚು ಯಶಸ್ಸು ಮಾಡಿರಲಿಲ್ಲ. ಆ ಚಿತ್ರದಲ್ಲಿ ಧರ್ಮಗುರುವಿನ ಪಾತ್ರವನ್ನು ಫಹಾದ್ ಮಾಡಿದ್ದರು. ಧರ್ಮಗಳ ಕುರಿತ ಸಾಕಷ್ಟು ವಿಚಾರಗಳು ಆ ಸಿನಿಮಾದಲ್ಲಿ ಇದ್ದವು. ಫಹಾದ್ ಫಾಸಿಲ್ ನಟನೆಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ವೀಕ್ಷಣೆ ಮಾಡಿದವರಿಂದ ಉತ್ತಮ ಪ್ರತಿಕ್ರಿಯೆ ದಕ್ಕಿತ್ತು. ಹಾಗಿದ್ದರೂ ಕೂಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಲಿಲ್ಲ. 

ಸತ್ತೆನೆಂದು ಸುದ್ದಿ ಮಾಡಿದ ಬಳಿಕ ಈ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ: ವಿಡಿಯೋ ನೋಡಿ ತರಾಟೆ

ಈಗ ಟ್ರಾನ್ಸ್​ ಚಿತ್ರದ ಕುರಿತು ನಟ ಮಾತನಾಡಿದ್ದಾರೆ. ಈ ಚಿತ್ರವನ್ನು ಅನ್ವರ್ ರಶೀದ್ ನಿರ್ದೇಶನ ಮಾಡಿದ್ದರು. ಬೃಹತ್​ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ  ಚಿತ್ರದಲ್ಲಿ  ಮನರಂಜನಾ ಅಂಶದ ಕೊರತೆ ಇತ್ತು. ಆದರೆ ಸಾಕಷ್ಟು ಅರಿವು ಮೂಡಿಸುವಂತಹ ವಿಷಯಗಳು ಅದರಲ್ಲಿದ್ದವು. ಮನರಂಜನಾ ಅಂಶಗಳು ಸಿನಿಮಾದಲ್ಲಿ ಕಡಿಮೆ ಆಗಿದ್ದರಿಂದ, ಅದು ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಆಗಲೇ ನಾವು ವಿಫಲರಾಗಿದ್ದೆವು. ಆ ಕಾರಣಕ್ಕಾಗಿಯೇ ನಾನು ಮಲಯಾಳಂ ಸಿನಿಮಾಗಳಲ್ಲಿ ಸ್ವಲ್ಪ ಸಮಯದವರೆಗೆ ಧರ್ಮವನ್ನು ಮುಟ್ಟುವುದಿಲ್ಲ. ಜನರಿಗೆ ಸತ್ಯ ಬೇಡ, ಮನರಂಜನೆ ಅಷ್ಟೇ ಬೇಕು ಎಂದಿದ್ದಾರೆ. ಇದೇ ವೇಳೆ ಧರ್ಮಕ್ಕೆ ಸಂಬಂಧಿಸಿದ ವಿವಾದಾತ್ಮಕ ವಿಷಯಗಳಿಂದಲೂ ದೂರವಿರುವ ಬಗ್ಗೆಯೂ ಮಾತನಾಡಿದ್ದಾರೆ. "ನನ್ನ ಸಿನಿಮಾಗಳಲ್ಲಿ ನಾನು ಕೊಂಚ ದೂರವೇ ಸರಿಸುವ ಏಕೈಕ ವಿಷಯವೆಂದರೆ ಅದು ಧರ್ಮ ಎಂದು ಟ್ರಾನ್ಸ್‌ ಸಿನಿಮಾ ನೆನಪಿಸಿಕೊಂಡಿದ್ದಾರೆ.  

ಒಬ್ಬ ಪ್ರೇಕ್ಷಕ ಚಿತ್ರಮಂದಿರದಿಂದ ಹೊರಬಂದ ನಂತರ ನನ್ನನ್ನು ಗಂಭೀರವಾಗಿ ಪರಿಗಣಿಸಬಾರದು. ಚಿತ್ರಮಂದಿರದ ಒಳಗೆ ಇರುವಾಗ ಮಾತ್ರ ನನ್ನ ಸಿನಿಮಾದ ಬಗ್ಗೆ ಯೋಚಿಸಬೇಕು. ಪ್ರೇಕ್ಷಕರು ಅವರ ಮನೆಗಳಿಗೆ ಹೋಗಿ, ಅವರವರ ಮನೆಯ ಡೈನಿಂಗ್‌ ಟೇಬಲ್‌ಗಳಲ್ಲಿ ಕುಳಿತು ಸಿನಿಮಾ, ಕಲಾವಿದರ ನಟನೆ ಕುರಿತು ಚರ್ಚಿಸುವುದನ್ನು ನಾನು ಇಷ್ಟಪಡುವುದಿಲ್ಲ. ಸಿನಿಮಾವೆಂದರೆ ಅಷ್ಟೇ, ಅದಕ್ಕೂ ಒಂದು ಮಿತಿಯಿದೆ.  ಇನ್ನು ಕೇರಳಿಗರ ಕುರಿತು ಹೇಳುವುದಾದರೆ, ಕೇರಳದಲ್ಲಿ ಧರ್ಮದೊಂದಿಗೆ ವ್ಯವಹರಿಸುವ ಬಗ್ಗೆ ನನಗೆ ಒಂದು ಇತಿಮಿತಿ  ಇದೆ. ಈ ಬಗ್ಗೆ ನಾನು ಹೇಳುವುದಾದರೆ, ಜನರು ಕಟು ವಾಸ್ತವವನ್ನು ಕೇಳಲು ಬಯಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಜನರಿಗೆ ಮನರಂಜನೆ ಬೇಕು. ನಕ್ಕು ಹಗುರಾಗುವುದನ್ನು ಬಯಸುತ್ತಾರೆ. ಹಾಗಾಗಿ ಈ ಧರ್ಮದ ವಿಚಾರಗಳ ಬಗ್ಗೆ ನಾನು ನನ್ನ ಸಿನಿಮಾದಲ್ಲಿ ಹೇಳಲು ಇಷ್ಟಪಡುವುದಿಲ್ಲ" ಎಂದಿದ್ದು ಸದ್ಯ ಇದು ಚರ್ಚೆಯಾಗುತ್ತಿದೆ.

ಚಿಕ್ಕ ವಯಸ್ಸಲ್ಲೇ ಅಲ್ಲಿ ಕರೆದೊಯ್ದರು.. ಏನಾಗ್ತಿದೆ ಎಂದು ಅರಿವಷ್ಟರಲ್ಲಿಯೇ.. ಪೋರ್ನ್​ ಸ್ಟಾರ್​ ಕರಾಳ ಅಧ್ಯಾಯ
 

Follow Us:
Download App:
  • android
  • ios