Asianet Suvarna News Asianet Suvarna News

ನಟ ಸಂಜಯ್​ ಕಪೂರ್​ ಅನೈತಿಕ ಸಂಬಂಧಗಳನ್ನು ಹೀಗೆ ಸಮರ್ಥಿಸಿಕೊಂಡ ಪತ್ನಿ ಮಹೀಪ್​ !

ನಟ ಸಂಜಯ್​ ಕಪೂರ್​ ಅನೈತಿಕ ಸಂಬಂಧಗಳನ್ನು ಪತ್ನಿ ಮಹೀಪ್​ ಕಪೂರ್​ ಸಮರ್ಥಿಸಿಕೊಂಡಿದ್ದು ಹೇಗೆ?  
 

Maheep Kapoor DEFENDS Sanjay Kapoors Extramarital Affair Says Everyone Is Not Perfect suc
Author
First Published May 14, 2024, 12:22 PM IST

ಇತ್ತೀಚಿನ ದಿನಗಳಲ್ಲಿ ಅಕ್ರಮ, ಅನೈತಿಕ, ವಿವಾಹೇತರ ಸಂಬಂಧ ಎನ್ನುವುದು ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಸಿನಿಮಾ ಕ್ಷೇತ್ರ ಎಂದರೆ ಅಲ್ಲಿ ಮೊದಲಿನಿಂದಲೂ ಇಂಥ ಒಂದು ಸಂಬಂಧಗಳ ಬಗ್ಗೆ ಕೇಳುತ್ತಲೇ ಇದ್ದೇವೆ. ಆದರೆ ಪತಿಗೆ ಅಕ್ರಮ ಸಂಬಂಧವಿದ್ದರೂ ಇದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುವವರು ಸಿಗುವುದು ಬಲು ಕಷ್ಟಸಾಧ್ಯ. ಆದರೆ ಇದೀಗ ನಟ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ ತಮ್ಮ ಪತಿಯ ಅಕ್ರಮ ಸಂಬಂಧವನ್ನು ಒಪ್ಪಿಕೊಂಡಿದ್ದು, ಅದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಂದಹಾಗೆ, ಸುಶ್ಮಿತಾ ಸೇನ್‌ ಜೊತೆ ಬ್ರೇಕ ಅಪ್ ಆದ ನಂತರ ಸಂಜಯ್​ ಕಪೂರ್​ ಅವರು ಮಹೀಪ್ ಅವರನ್ನು ಪ್ರೀತಿಸಿ ಮದುವೆಯಾದವರು.  ಸಂಜಯ್​ ಅವರು, ಬಾಲಿವುಡ್ ಸ್ಟಾರ್​ಗಳಾದ  ಅನಿಲ್ ಕಪೂರ್​ ಮತ್ತು ಬೋನಿ ಕಪೂರ್ ಅವರ ತಮ್ಮ. ಸಂಜಯ್ ಮತ್ತು ಮಹೀಪ್ 1997 ರಲ್ಲಿ ವಿವಾಹವಾದರು. ಎರಡು ವರ್ಷಗಳ ನಂತರ, ಮಹೀಪ್ ಶನಾಯಾ ಎಂಬ ಮಗಳಿಗೆ ಜನ್ಮ ನೀಡಿದರು. ಅವರಿಗೆ 2006 ರಲ್ಲಿ ಜನಿಸಿದ ಜಹಾನ್ ಎಂಬ ಮಗನೂ ಇದ್ದಾನೆ.  

 ಮಹೀಪ್ ಕಪೂರ್ ಮೂಲತಃ ಪಂಜಾಬ್‌ನವರಾಗಿದ್ದು ವೃತ್ತಿಯಲ್ಲಿ ಆಭರಣ್ಯ ವಿನ್ಯಾಸ ಮಾಡುತ್ತಾರೆ. ಮದುವೆಗೂ ಮುನ್ನ ಇವರು ಆಸ್ಟ್ರೇಲಿಯಾದಲ್ಲಿ  ವಾಸವಿದ್ದರು. ಇದೀಗ ಪತಿಯ ಅನೈತಿಕ ಸಂಬಂಧವನ್ನು ಸಮರ್ಥಿಸಿಕೊಂಡು ಮಾತನಾಡಿದ್ದು ಅದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ತಮ್ಮ ಪತಿಯ ದಾಂಪತ್ಯ ದ್ರೋಹದ ಕುರಿತು ಆರಂಭದಲ್ಲಿ ಅವರು ಟಿ.ವಿ.ಷೋ ಒಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.  ತಮ್ಮ ಮದುವೆಯ ಆರಂಭಿಕ ದಿನಗಳಲ್ಲಿ ಸಂಜಯ್ ಅನೈತಿಕ ಸಂಬಂಧ ಹೊಂದಿದ್ದರು. ಅವರು ಬಹಳಷ್ಟು ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ್ದರು. ಆದರೆ ಈ ಬಗ್ಗೆ ನಾನು ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ. ಯಾಕೆಂದರೆ ಯಾರೂ ಪರಿಪೂರ್ಣರು ಅಲ್ಲ. ಎಲ್ಲರೂ ಅನೈತಿಕ ಸಂಬಂಧದ ಮೊರೆ ಹೋಗುವವರೇ. ಸಾಮಾಜಿಕ ಮಾನದಂಡಗಳಿಂದ ಅಸಾಂಪ್ರದಾಯಿಕವೆಂದು ಪರಿಗಣಿಸಬಹುದಾದ ದೃಷ್ಟಿಕೋನ ಇದಾಗಿದೆ. ಆದರೆ ಇದರ ಬಗ್ಗೆ ತಿಳಿವಳಿಕೆ ಅಗತ್ಯವಿದೆ.  ಜನರು ತಮ್ಮ ಸೌಕರ್ಯ ವಲಯಗಳಿಂದ ಹೊರಬಂದು ಇಂಥ ಸಂಬಂಧಗಳ ಬಗ್ಗೆ ಯೋಚಿಸಬೇಕು. ಆ ವ್ಯಕ್ತಿಯ ಸ್ಥಾನದಲ್ಲಿ ನಿಂತು ಯೋಚನೆ  ಮಾಡಿದರೆ, ಇಂಥ ಸಂಬಂಧದಲ್ಲಿ ತಪ್ಪೇನಿಲ್ಲ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ. ಈ ಮೂಲಕ ಪತಿಯ ಅನೈತಿಕ ಸಂಬಂಧವನ್ನು ಮಹೀಪ್​  ಸಮರ್ಥಿಸಿಕೊಂಡಿದ್ದಾರೆ. 

ಆ ನಟಿ ಕೈಕೊಟ್ಟಾಗ ಹೃದಯವೇ ಕಿತ್ತುಬಂತು, ಆಮೇಲೆ ಅದೃಷ್ಟದ ಬಾಗಿಲೇ ತೆರೆಯಿತು: ನಟ ಮಿಥುನ್​ ಚಕ್ರವರ್ತಿ
 
ಸಂಜಯ್​ ಎಷ್ಟೇ ಸಂಬಂಧ ಹೊಂದಿದ್ದರೂ,  ಏನು ಮಾಡಿದರೂ  ಮಗಳ ಬಗ್ಗೆ ಮಾತ್ರ ಹುಚ್ಚನಾಗಿದ್ದಾರೆ.  ಅವರು  ಮಗಳು ಶನಾಯಾ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದು, ತುಂಬಾ ಪ್ರೀತಿಸುತ್ತಾರೆ.  ಮಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಮಗನಿಗಿಂತಲೂ ಮಗಳ ಮೇಲೆ ಅವರಿಗೆ ಪ್ರೀತಿ ಹೆಚ್ಚು. ಆದ್ದರಿಂದ ಅವರ ಅನೈತಿಕ ಸಂಬಂಧದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲೇ ಇಲ್ಲ. ಅವರು ಎಷ್ಟೇ ಬೇರೆ ಸಂಬಂಧ ಹೊಂದಿದರೂ  ಮಕ್ಕಳಿಗಾಗಿ ಮದುವೆಯನ್ನು ಮುರಿದುಕೊಳ್ಳಲಿಲ್ಲ. ಆದ್ದರಿಂದ ಅವರು ಮೋಸ ಮಾಡಿದ್ದಾರೆ ಎಂದು ನಾನು ನಂಬುವುದಿಲ್ಲ ಎಂದಿದ್ದಾರೆ. 

ಹಿಂದೊಮ್ಮೆ ಮಹೀಪ್​ ಅವರು, ತಮ್ಮ ಮತ್ತು ಪತಿಯ ದಾಂಪತ್ಯದ ಕುರಿತು ಕಾಫಿ ವಿತ್ ಕರಣ್ ಷೋನಲ್ಲಿ ಮಾತನಾಡಿದ್ದರು. 'ನಮ್ಮ ಜೀವನದಲ್ಲಿ ಒಂದು ಮರೆಯಲಾಗದ ಹಂತವಿತ್ತು. ಒಂದು ವರ್ಷಗಳ ಕಾಲ ಸಂಜಯ್ ಕಪೂರ್ ಕೆಲಸವಿಲ್ಲದೆ ಮನೆಯಲ್ಲಿದ್ದರು' ಎಂಬುದನ್ನು ಬಹಿರಂಗಪಡಿಸಿದ್ದರು.  ಆ ಸಮಯದಲ್ಲಿ ಆದ ಹಣಕಾಸಿನ ಸಮಸ್ಯೆಗಳ ಕುರಿತು ಅವರು ಮಾತನಾಡಿದ್ದರು. 'ಹಣದ ಸಮಸ್ಯೆ ತುಂಬಾನೇ ಇತ್ತು.  ಮಕ್ಕಳು ಶರಣ್ಯ ಕಪೂರ್ ಮತ್ತು ಜಹಾನ್ ಕಪೂರ್ ಬೆಳೆದು ನಿಂತಿದ್ದರು. ಅವರು ಗ್ಲಾಮರ್ ಪ್ರಪಂಚಕ್ಕೆ ಪರಿಚಯ ಆಗಿದ್ದರು. ಆ ಸಮಯದಲ್ಲಿ ಹಣಕಾಸಿನ ಸಮಸ್ಯೆ ತೀವ್ರವಾಗಿತ್ತು.  ನಮ್ಮ ಸುತ್ತಲಿರುವ ಜನರು ನೆಗೆಟಿವ್ ಆಗಿ ಮಾತನಾಡಲು ಶುರು ಮಾಡಿದ್ದರು. ಕೊನೆಗೆ ಸಹಜ ಜೀವನಕ್ಕೆ ಬರಲು ಸಾಕಷ್ಟು ಶ್ರಮ ಪಡಬೇಕಾಗಿತ್ತು ಎಂದಿದ್ದರು. 
 

ಒಂದೂವರೆ ಲಕ್ಷ ಬೆಲೆಯ ಡ್ರೆಸ್​ನಲ್ಲಿ ಮಿಂಚಿದ ದಿಶಾ ಪಟಾನಿ : ಡ್ರೆಸ್ಸೇ ಕಾಣಿಸ್ತಿಲ್ವಲ್ಲಾ ಕೇಳೋದಾ ಫ್ಯಾನ್ಸ್​!

Latest Videos
Follow Us:
Download App:
  • android
  • ios