Asianet Suvarna News Asianet Suvarna News

ಬೆಂಗಳೂರು: ಮನೆಗಳ್ಳನ ಬಂಧನ: ₹13 ಲಕ್ಷದ ಚಿನ್ನಾಭರಣ ಜಪ್ತಿ

ನಗರದಲ್ಲಿ ಮನೆಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ಕಳ್ಳನೊಬ್ಬನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೋಟೆ ಗ್ರಾಮದ ಗಣೇಶ ಅಲಿಯಾಸ್‌ ಟಚ್ಚು ಬಂಧಿತ

Thief arrested 13 lakh gold jewelery seized by police rav
Author
First Published May 1, 2024, 7:44 AM IST

ಬೆಂಗಳೂರು ಮೇ.1): ನಗರದಲ್ಲಿ ಮನೆಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ಕಳ್ಳನೊಬ್ಬನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
 
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೋಟೆ ಗ್ರಾಮದ ಗಣೇಶ ಅಲಿಯಾಸ್‌ ಟಚ್ಚು ಬಂಧಿತನಾಗಿದ್ದು, ಆರೋಪಿಯಿಂದ 210 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೇಜಿ ಬೆಳ್ಳಿ ವಸ್ತುಗಳು ಸೇರಿ ಒಟ್ಟು ₹13.35 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಪ್ರಭಾಕರ ರೆಡ್ಡಿ ಅವರ ಎರಡನೇ ಪತ್ನಿ ಪವಿತ್ರಾ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಚುನಾವಣಾ ಹೊತ್ತಲ್ಲಿ ಹೊಸೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ!

ಗಣೇಶ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಾಲಹಳ್ಳಿ ಕ್ರಾಸ್‌ ಕಮ್ಮಗೊಂಡನಹಳ್ಳಿ ಬಳಿ ಗಣೇಶ ವಾಸವಾಗಿದ್ದ. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಆತ ಕನ್ನ ಹಾಕುತ್ತಿದ್ದ. ಹೀಗೆ ದೋಚಿದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಆತ ಮೋಜು ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈತನ ಬಂಧನದಿಂದ ರಾಜರಾಜೇಶ್ವರಿ ನಗರ, ಸುಬ್ರಹ್ಮಣ್ಯಪುರ, ಚಂದ್ರಾಲೇಔಟ್ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖಾಲಿ ಮನೆಯಲ್ಲಿ ಚಿನ್ನ ಕಳವು ದೂರು!

ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಭಾಕರ್ ಪತ್ನಿ ಸುಳ್ಳು ದೂರು ನೀಡಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಫೆ.19ರಂದು ಚನ್ನಪಟ್ಟಣಕ್ಕೆ ಪ್ರಭಾಕರ್‌ ರೆಡ್ಡಿ ಪತ್ನಿ ಪವಿತ್ರಾ ತೆರಳಿದ್ದರು. ಆ ವೇಳೆ ಅವರ ಮನೆ ಬೀಗ ಮುರಿದು 400 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಿ ಅವರು ದೂರು ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ಆರೋಪಿ ಗಣೇಶ್‌ನನ್ನು ಬಂಧಿಸಿ ವಿಚಾರಿಸಿದಾಗ ದೂರುದಾರರ ಕಳ್ಳತನ ಸುಳ್ಳಿನ ಕತೆ ಬಯಲಾಗಿದೆ.
ಮನೆ ಖಾಲಿ ಮಾಡಿಕೊಡು ಚನ್ನಪಟ್ಟಣಕ್ಕೆ ಪವಿತ್ರ ತೆರಳಿದ್ದರು. ಖಾಲಿ ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿರಲಿಲ್ಲ. ಆದರೆ ಮನೆ ಬೀಗ ಮುರಿದು ಆರೋಪಿ ಒಳ ಪ್ರವೇಶಿಸಿದ್ದ. ಈ ಸಂಗತಿ ತಿಳಿದು ತಮ್ಮ ಪರಿಚಿತ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಸಲಹೆ ಮೇರೆಗೆ ಮನೆಗಳ್ಳತನ ಬಗ್ಗೆ ಠಾಣೆಗೆ ಅವರು ದೂರು ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.


ಬೈಕ್‌ ಡಿಕ್ಕಿಯಾಗಿ ಲಾರಿ ಚಾಸಿ ಕೆಳಗೆ ಸಿಲುಕಿದ ಚಾಲಕ ಸಾವು

ಆನೇಕಲ್: ಪಂಕ್ಚರ್ ಆಗಿದ್ದ ಲಾರಿಯ ಟೈರ್ ಬದಲಾವಣೆ ಮಾಡಲು ಜಾಕ್ ಹಾಕುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಜಾಕ್ ಜಾರಿ ಲಾರಿ ಚಾಸಿ ಚಾಲಕನ ಮೇಲೆ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಸುಣವಾರ ಗೇಟ್ ಬಳಿ ನಡೆದಿದೆ.

ಬೆಂಗಳೂರು: ಬಸ್ಸಲ್ಲಿ ಮೊಬೈಲ್‌ ಕದಿಯುತ್ತಿದ್ದ ಗೋಕವರಂ ಗ್ಯಾಂಗ್‌ ಬಲೆಗೆ

ಅಪಘಾತದಲ್ಲಿ ದೊಡ್ಡ ಹಾಗಡೆ ನಿವಾಸಿ ಮನು ಮೃತಪಟ್ಟ ಚಾಲಕ. ಗೊಬ್ಬರ ತುಂಬಿದ್ದ ಲಾರಿಯನ್ನು ಅನ್ಲೋಡ್ ಮಾಡಲು ಹೋಗುತ್ತಿದ್ದಾಗ ಸುಣವಾರ ಗೇಟ್ ಬಳಿ ಲಾರಿ ಟೈಯರ್‌ ಪಂಕ್ಚರ್‌ ಆದಾಗ ಟೈರ್ ಬದಲಾಯಿಸಲು ಮನು ಲಾರಿಯ ಕೆಳಗೆ ಮಲಗಿ ಜಾಕ್ ಹಾಕುತ್ತಿದ್ದರು. ಕತ್ತಲಿನಲ್ಲಿ ಕಾಣದೆ ಅತಿವೇಗವಾಗಿ ಬಂದ ಬೈಕ್ ಲಾರಿಗೆ ಡಿಕ್ಕಿ ಹೊಡೆದೆ. ಇದರಿಂದ ಜಾಕ್‌ ಜಾರಿದೆ. ತಕ್ಷಣವೇ ಲಾರಿಯ ಚಾಸಿ ಮನು ಮೇಲೆ ಬಿದ್ದಿದೆ. ಇದರಿಂದ ಮೆದುಳು ಹೊರಗೆ ಬಂದು ಲಾರಿಯ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಆನೇಕಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios