Asianet Suvarna News Asianet Suvarna News

ಬರೀ 30 ನಿಮಿಷ ನಿದ್ದೆಗೆ ಜಾರಿದ ಸ್ಟೇಷನ್ ಮಾಸ್ಟರ್‌: ವಿಳಂಬ ಆಗಿದ್ದೆಷ್ಟು ಟ್ರೈನ್?

 ಸ್ಟೇಷನ್‌ ಮಾಸ್ಟರ್ ಕರ್ತವ್ಯದಲ್ಲಿದ್ದಾಗಲೇ ನಿದ್ದೆಗೆ ಜಾರಿದ ಪರಿಣಾಮ ಎಕ್ಸ್‌ಪ್ರೆಸ್ ರೈಲೊಂದು ಗ್ರೀನ್ ಸಿಗ್ನಲ್‌ಗಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದ ಘಟನೆ ಉತ್ತರ ಪ್ರದೇಶದ ಇಟವಾದಲ್ಲಿ ನಡೆದಿದೆ

Railway station Master fell asleep 30 minutes at udi mor Railway station what happend next is here akb
Author
First Published May 5, 2024, 4:34 PM IST

ನವದೆಹಲಿ: ಸ್ಟೇಷನ್‌ ಮಾಸ್ಟರ್ ಕರ್ತವ್ಯದಲ್ಲಿದ್ದಾಗಲೇ ನಿದ್ದೆಗೆ ಜಾರಿದ ಪರಿಣಾಮ ಎಕ್ಸ್‌ಪ್ರೆಸ್ ರೈಲೊಂದು ಗ್ರೀನ್ ಸಿಗ್ನಲ್‌ಗಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದ ಘಟನೆ ಉತ್ತರ ಪ್ರದೇಶದ ಇಟವಾದಲ್ಲಿ ನಡೆದಿದೆ. ಘಟನೆಯನ್ನು ಗಂಭಿರವಾಗಿ ಪರಿಗಣಿಸಿರುವ ಆಗ್ರಾ ವಿಭಾಗದ ರೈಲ್ವೆ ಅಧಿಕಾರಿಗಳು, ಈ ಕುರಿತು ವಿವರ ನೀಡುವಂತೆ ನಿದ್ದೆಗೆ ಜಾರಿದ ಸ್ಟೇಷನ್ ಮಾಸ್ಟರ್‌ಗೆ ನೊಟೀಸ್ ಕಳುಹಿಸಿದ್ದಾರೆ. 

ಮೇ 3 ರಂದು ಶುಕ್ರವಾರ, ಪಾಟ್ನಾ ಕೋಟಾ ಎಕ್ಸ್‌ಪ್ರೆಸ್‌ ರೈಲೊಂದು ಗ್ರೀನ್‌ ಸಿಗ್ನಲ್‌ಗಾಗಿ ಇಟವಾದ ಉದಿಮೊರ್ ರೋಡ್ ರೈಲು ನಿಲ್ದಾಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದೆ. ಸ್ಟೇಷನ್ ಮಾಸ್ಟರ್‌ನ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಈಗ ರೈಲ್ವೆ ಮೇಲಾಧಿಕಾರಿಗಳು ಈ ಬಗ್ಗೆ ವಿವರ ನೀಡುವಂತೆ ಅಧಿಕಾರಿಯನ್ನು ಕೇಳಿದ್ದಾರೆ.  ಕರ್ತವ್ಯ ನಿರ್ಲಕ್ಷ್ಯ ತೋರಿದ ಸ್ಟೇಷನ್ ಮಾಸ್ಟರ್ ವಿರುದ್ಧ ಚಾರ್ಜ್‌ಶೀಟ್ ಕಳುಹಿಸಿದ್ದು, ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಆಗ್ರಾ ರೈಲ್ವೆ ವಿಭಾಗದ ಪಿಆರ್‌ಒ ಪ್ರಶಸ್ತಿ ಶ್ರಿವಾಸ್ತವ್ ಹೇಳಿದ್ದಾರೆ. ಆಗ್ರಾದಿಂದ ಪ್ರಯಾಗ್‌ರಾಜ್‌ಗೆ ಹೋಗುವ ಮಾರ್ಗವಾದರಿಂದ  ಹಾಗೂ ಈ ಮಾರ್ಗದ ಮೂಲಕವೇ ಝಾನ್ಸಿ ಪಾಸ್ ಆಗುವುದರಿಂದ ಉದಿ ಮೊರ್ ರೈಲ್ವೆ ನಿಲ್ದಾಣವು ಸಣ್ಣ ರೈಲು ನಿಲ್ದಾಣವಾದರೂ ಇಟವಾಗಿಂತ ಮೊದಲು ಸಿಗುವ ಅತ್ಯಂತ ಮಹತ್ವದ ರೈಲು ನಿಲ್ದಾಣವಾಗಿದೆ. 

ದೇಶದ ಮೊದಲ ವಂದೇ ಭಾರತ್‌ ಮೆಟ್ರೋ ರೈಲು, ಸ್ಲೀಪರ್ ಆವೃತ್ತಿ ಪ್ರಾಯೋಗಿಕ ಸಂಚಾರ ಜುಲೈನಲ್ಲಿ ಆರಂಭ

ಮೂಲಗಳ ಪ್ರಕಾರ, ಪಾಟ್ನಾ ಕೋಟಾ ಎಕ್ಸ್‌ಪ್ರೆಸ್‌ ರೈಲಿನ ಲೋಕೋ ಪೈಲಟ್, ಹಲವು ಬಾರಿ ಈ ಹಾರ್ನ್ ಹಾಕಿ ಸ್ಟೇಷನ್ ಮಾಸ್ಟರ್‌ನನ್ನು ಎಬ್ಬಿಸಲು ಪ್ರಯತ್ನಿಸಿದರು ಆದರೂ ಸುಮಾರು ಅರ್ಧ ಗಂಟೆಯ  ನಂತರವಷ್ಟೇ ಅವರು ಎಚ್ಚೆತ್ತು ಗ್ರೀನ್ ಸಿಗ್ನಲ್ ಆನ್ ಮಾಡಿ ರೈಲು ಹೋಗಲು ಬಿಟ್ಟರು ಎಂದು ವರದಿ ಆಗಿದೆ.  ಹಾಗೆ ಘಟನೆಗೆ ಸಂಬಂಧಿಸಿದಂತೆ ಸ್ಟೇಷನ್ ಮಾಸ್ಟರ್ ಕೂಡ ತಪ್ಪೊಪ್ಪಿಕೊಂಡಿದ್ದು, ಕ್ಷಮೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಆ ಸ್ಟೇಷನ್‌ನಲ್ಲಿ ತಾನು ಒಬ್ಬನೇ ಇದ್ದು, ಪಾಯಿಂಟ್ಸ್‌ಮ್ಯಾನ್ ಹಳಿ ಪರಿಶೀಲನೆಗಾಗಿ ಹೋಗಿದ್ದರಿಂದ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

ರೈಲಿನ ಚಕ್ರಗಳ ನಡುವೆ ಕುಳಿತು 100 ಕಿಲೋ ಮೀಟರ್ ಪ್ರಯಾಣಿಸಿದ ಬಾಲಕನ ರಕ್ಷಣೆ

 

Follow Us:
Download App:
  • android
  • ios