Asianet Suvarna News Asianet Suvarna News

ಪ್ರಧಾನಿ ಮೋದಿ ವಿರುದ್ಧ ಶ್ಯಾಮ್ ರಂಗೀಲಾ ಸ್ಪರ್ಧೆ, ಕಾಮಿಡಿಯನ್ ಪರ ನಟ ಕಿಶೋರ್ ಬ್ಯಾಟಿಂಗ್!

ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಹಲವರು ಮಿಮಿಕ್ರಿ ಮಾಡುವ ಮೂಲಕ ಭಾರಿ ಜನಪ್ರಿಯಗೊಂಡಿರುವ ಕಾಮಿಡಿಯನ್ ಶ್ಯಾಮ್ ರಂಗೀಲಾ ಇದೀಗ ಮೋದಿ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಕಾಮಿಡಿಯನ್‌ಗೆ ಮತ ನೀಡಿ ಗೆಲ್ಲಿಸಲು ನಟ ಕಿಶೋರ್ ಮನವಿ ಮಾಡಿದ್ದಾರೆ.
 

Sandalwood Actor Kishore request people to vote for Comedian Shyam Rangeela who contesting against Modi ckm
Author
First Published May 3, 2024, 9:31 PM IST

ಬೆಂಗಳೂರು(ಮೇ.03) ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಮಿಡಿಯನ್ ಶ್ಯಾಮ್ ರಂಗೀಲಾ ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಅತೀವ ಸಂತಸ ವ್ಯಕ್ತಪಡಿಸಿರುವ ನಟ ಕಿಶೋರ್, ಕಾಮಿಡಿಯನ್ ಪರ ಬ್ಯಾಟ್ ಬೀಸಿದ್ದಾರೆ. ಶ್ಯಾಮ್ ರಂಗೀಲಾಗೆ ಮತ ನೀಡಿ ಗೆಲ್ಲಿಸುವಂತೆ ನಟ ಕಿಶೋರ್ ಜನತೆಯಲ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ ಶ್ಯಾಮ್ ರಂಗೀಲಾ ಸಂಸದರಾದರೆ, ನಿಮ್ಮ ಕಾಮಿಡಿಯನ್ ಸ್ಥಾನವನ್ನು ಮೋದಿ ತುಂಬಲಿದ್ದಾರೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಶ್ಯಾಮ್ ರಂಗೀಲಾ ಪರ ಸಾಮಾಜಿಕ ಮಾಧ್ಯಮದಲ್ಲಿ ನಟ ಕಿಶೋರ್ ಮನವಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ನಟ ಕಿಶೋರ್, ಮೋದಿಗಿಂತ ಶ್ಯಾಮ್ ರಂಗೀಲಾ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.  ಮೋದಿ ಓರ್ವ ಕಾಮಿಡಿ ಪೀಸ್ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಸದಾ ಸುಳ್ಳು ಬೊಗಳುವ ರಾಜನ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ ಎಸ್‌ಬಿಐ: ಕಿಶೋರ್‌

ದಯವಿಟ್ಟು ಶ್ಯಾಮ್ ರಂಗೀಲಾರಿಗೆ ಓಟು ಹಾಕಿ. ಅವರಿಗೂ ಒಂದು ಅವಕಾಶ ಕೊಡಿ. ನಿಮ್ಮ ನಿರ್ಣಯದ ಬಗ್ಗೆ ಹೆಮ್ಮೆಯಿದೆ ಶ್ಯಾಮ್ ರಂಗೀಲಾ. ನೀವು ವಾರಣಾಸಿಯ ಜನಗಳಿಗೆ ಖಂಡಿತಾ ಮೋದಿಗಿಂತ ಪ್ರಾಮಾಣಿಕ ಸೇವೆ ಸಲ್ಲಿಸುತ್ತೀರೆಂಬ ನಂಬಿಕೆಯಿದೆ. ನಿಮಗೆ ಜಯವಾಗಲಿ. ನೀವು ಸಂಸದರಾಗಿ ಜನಸೇವೆಗೆ ನಿಂತರೆ ನಾವು ನಿಮ್ಮ ಕಾಮಿಡಿ ಮಿಸ್ ಮಾಡಬಹುದೇನೊ. ಆದರೆ ಮೋದಿ ನೀವು ಬಿಟ್ಟ ಸ್ಥಾನ ತುಂಬಿ ನಿಮಗಿಂತ ಒಳ್ಳೆಯ ಕಾಮೀಡಿಯನ್ ಆಗಿ ನಮ್ಮನ್ನು ರಂಜಿಸುವುದರಲ್ಲಿ ನಮಗ್ಯಾವ ಅನುಮಾನವೂ ಇಲ್ಲ. ಅದರ ಸಾಧ್ಯತೆಗಳನ್ನು ಕಳೆದ 10 ವರ್ಷಗಳಲ್ಲಿ ದೇಶದ ಪ್ರಜೆಗಳೆಲ್ಲ ಕಂಡಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.

 

 

ನಟ ಕಿಶೋರ್ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯುತ್ತಿರುವುದು ಇದೇ ಮೊದಲಲ್ಲ. ಸಾಮಾಜಿಕ ಮಾಧ್ಯಮದ ಮೂಲಕ ಹಲವು ಬಾರಿ ಗುಡುಗಿದ್ದಾರೆ. ಮೋದಿ ನಿರ್ಧಾರಗಳು, ನಡೆ ಕುರಿತು ತೀವ್ರವಾಗಿ ಟೀಕಿಸಿದ್ದಾರೆ. ಇದೀಗ ಮೋದಿ ವಿರುದ್ಧ ಅಖಾಡಕ್ಕಿಳಿದಿರುವ ಶ್ಯಾಮ್ ರಂಗೀಲಾಗೆ ಮತ ನೀಡಿ ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.

'ಇದು ರಾಮ ರಾಜ್ಯವೋ, ಹರಾಮ್‌ ರಾಜ್ಯವೋ..' ನಟ ಕಿಶೋರ್‌ ಟೀಕೆ!

2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ಹುಲಿಗಳ ವೀಕ್ಷಿಸಿದ್ದರು. ಈ ವೇಳೆ ಮೋದಿ ಧರಿಸಿದ್ದ ಡ್ರೆಸ್ ರೀತಿಯಲ್ಲೇ ಡ್ರೆಸ್ ಧರಿಸಿ ಟೋಪಿ ಹಾಕಿ ಶ್ಯಾಮ್ ರಂಗೀಲಾ ಜೈಪುರದ ಜಲಾನಾ ಜಂಗಲ್ ಸಫಾರಿ ಮಾಡಿದ್ದಾರೆ. ಈ ವೇಳೆ ನೀಲಾಗಿಯಿಗೆ ಆಹಾರ ತಿನ್ನಿಸಿದ ವಿಡಿಯೋ ಮಾಡಿದ್ದರು. ಕಾಡು ಪ್ರಾಣಿಗಳಿಗೆ ಆಹಾರ ನೀಡುವುದು ಕಾನೂನು ಬಾಹಿರವಾಗಿದೆ.  ಈ ಮೂಲಕ ನಿಯಮ ಉಲ್ಲಂಘಿಸಿ ನೋಟಿಸ್ ಪಡೆದಿದ್ದರು. ಆರಂಭದಲ್ಲಿ ಮೋದಿ ಅಭಿಮಾನಿಯಾಗಿದ್ದ ಶ್ಯಾಮ್ ರಂಗೀಲಾ ಬಳಿಕ ಮೋದಿ ವಿರುದ್ಧ ನಿಲುವ ವ್ಯಕ್ತಪಡಿಸಿದ್ದರು. ಇದೀಗ ಮೋದಿ ವಿರುದ್ಧವೇ ಸ್ಪರ್ಧೆ ಮಾಡುವ ಮೂಲಕ ಸಂಚಲನ ಸಷ್ಟಿಸಿದ್ದಾರೆ.
 

Follow Us:
Download App:
  • android
  • ios