Asianet Suvarna News Asianet Suvarna News

ಜ್ಯೋತಿ ರೈದು ಎನ್ನಲಾದ ಅಶ್ಲೀಲ ಖಾಸಗಿ ವಿಡಿಯೋ ಕೇಸ್‌ಗೆ ಟ್ವಿಸ್ಟ್: ಸಂಕಷ್ಟದಲ್ಲಿ ಕಿರುತೆರೆ ನಟಿ!

ಜ್ಯೋತಿ ರೈ.. ಸೌತ್​​ ಕಿರುತೆರೆ ಬೋಲ್ಡ್‌ ಲೇಡಿ. ಪಡ್ಡೆ ಹುಡುಗರ ಪ್ರಿಟಿ ಗರ್ಲ್​​. ಈ ಸುಂದರಿ ಹಿಂದೆ ಬಿದ್ದು ಈಕೆಯನ್ನ ಫಾಲೋ ಮಾಡೋರು ಲಕ್ಷಗಟ್ಟಲೆ ಮಂದಿ. ವಯಸ್ಸು 38 ಆದ್ರು 18ರ ಹರೆಯದ ಮುದ್ದಾದ ಮಾಯಾವಿಯಂತಿರೋ ಜ್ಯೋತಿ ರೈ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. 

ಜ್ಯೋತಿ ರೈ.. ಸೌತ್​​ ಕಿರುತೆರೆ ಬೋಲ್ಡ್‌ ಲೇಡಿ. ಪಡ್ಡೆ ಹುಡುಗರ ಪ್ರಿಟಿ ಗರ್ಲ್​​. ಈ ಸುಂದರಿ ಹಿಂದೆ ಬಿದ್ದು ಈಕೆಯನ್ನ ಫಾಲೋ ಮಾಡೋರು ಲಕ್ಷಗಟ್ಟಲೆ ಮಂದಿ. ವಯಸ್ಸು 38 ಆದ್ರು 18ರ ಹರೆಯದ ಮುದ್ದಾದ ಮಾಯಾವಿಯಂತಿರೋ ಜ್ಯೋತಿ ರೈ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಜ್ಯೋತಿ ರೈ ಅವರದ್ದೇ ಎನ್ನಲಾದ ಅಶ್ಲೀಲ ಖಾಸಗಿ ವಿಡಿಯೋ ಹಾಗೂ ಫೋಟೊಗಳು ಹರಿದಾಡಿದ್ದು. ಬಾಲಿವುಡ್ಗೆ ಎಂಟ್ರಿ ಕೊಟ್ಟಿರೋ ನಟಿ ಜ್ಯೋತಿ ರೈ ಧಾರಾವಾಹಿ, ವೆಬ್ಸಿರೀಸ್, ಸಿನಿಮಾ ಅಂತ ಸಖತ್ಬ್ಯುಸಿಯಾಗಿದ್ರು. ಆದ್ರೆ ಈ ಬೆಂಕಿ ಬ್ಯೂಟಿ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿತ್ತು. ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಫೋಟೋಗಳನ್ನ ಲೀಕ್​ ಮಾಡಿದ್ರು. 

ಈ ಬಗ್ಗೆ ಆಕ್ರೋಶಗೊಂಡಿರೋ ಜ್ಯೋತಿ ರೈ ನಾನು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೇನೆ. ನನ್ನ ಹಾಗು ನನ್ನ ಕುಟುಂಬದ ಮಾನಹಾನಿ ಮಾಡುವ ಯತ್ನ ನಡೆದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳುತ್ತೇನೆ ಎಂದಿದ್ದಾರೆ. ಅಶ್ಲೀಲ ಫೋಟೋ ವೀಡಿಯೋ ವಿಚಾರದಿಂದ ಸುದ್ದಿಯಲ್ಲಿರೋ ನಟಿ ಜ್ಯೋತಿ ರೈ ಸಮಾಜಮುಖಿ ಕೆಲಸ ಮಾಡಿ ಆ  ನೋವಿನಿಂದ ಹೊರ ಬರಲು ಪ್ರಯತ್ನಿಸಿದ್ದಾರೆ. ಇತ್ತೀಚೆಗೆ ಪದ್ಮಶ್ರೀ ಪುರಸ್ಕೃತ ತೆಲುಗಿನ ಕಲಾವಿದ ಮೊಗಿಲಯ್ಯ ಹೈದರಾಬಾದ್ನ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದ್ರು. ಆ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಪದ್ಮಶ್ರೀ ಪುರಸ್ಕೃತ ಮೊಗಿಲಯ್ಯ ಸಂಕಷ್ಟದಲ್ಲಿದ್ದಾರೆ ಅಂತ ಗೊತ್ತಾಗಿತ್ತು. 

ಈ ವಿಷಯ ತಿಳಿದ ಜ್ಯೋತಿ ರೈ ಸಂಕಷ್ಟದಲ್ಲಿರೋ ಮೊಗಿಲಯ್ಯನವರಿಗೆ ಆರ್ಥಿಕ ಸಹಾಯಕ್ಕೆ ಮಾಡಿದ್ದಾರೆ. ಅಶ್ಲೀಲ ವೀಡಿಯೋ ಫೋಟೋದಿಂದ ಸಿಕ್ಕಾಪಟ್ಟೆ ಚರ್ಚೆಯಲ್ಲಿರೋ ನಟಿ ಜ್ಯೋತಿ ರೈ ಹಿನ್ನೆಲೆ ಬಗ್ಗೆ ಹೇಳಲೇ ಬೇಕು. ಈಕೆ ಕಿರುತೆರೆ ಕಲಾವಿಧೆ. ಕನ್ನಡದಲ್ಲಿ ಜನಪ್ರಿಯ ಧಾರಾವಾಹಿಗಳಾದ ಜೋಗುಳ, ಕಿನ್ನರಿ ಮೂಲಕ ಫೇಮಸ್ ಆದ್ರು. ಅಷ್ಟೆ ಅಲ್ಲ ಕನ್ನಡದಲ್ಲಿ ಸೀತಾರಾಮ ಕಲ್ಯಾಣ, ಗಂಧದ ಗುಡಿ ಮತ್ತು 99, ದಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಹಾಗೂ ತೆಲುಗು ಕಿರುತೆರೆ ಪ್ರಿಯರ ಮನಸ್ಸಿಗೆ ತೀರಾ ಹತ್ತಿರದಲ್ಲಿರೋ ಈ ಬ್ಯೂಟಿ ಸೌಂದರ್ಯದಿಂದಲೂ ಸಿಕ್ಕಾಪಟ್ಟೆ ಫೇಮಸ್. 

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಫಿಟ್​ನೆಸ್ ಫ್ರೀಕ್ ಕೂಡ ಹೌದು. ಸಧ್ಯ ಹೈದರಾಬಾದ್​​ನಲ್ಲಿರೋ ಜ್ಯೋತಿ ರೈ ಮೊದಲ ಮದುವೆ ಆದಾಗ ಸೌಂದರ್ಯದ ಬಗ್ಗೆ ಗಮನ ಕೊಟ್ಟಿರಲಿಲ್ಲ. ಆದ್ರೆ ಡಿವೋರ್ಸ್​ ಬಳಿಕ ಸಿಕ್ಕಾಪಟ್ಟೆ ಮೇಕೋವರ್ ಮಾಡಿಕೊಂಡು ಹಾಟ್​ ಆಗಿ ಕಾಣಿಸೋಕೆ ಶುರು ಮಾಡಿದ್ರು. ಅಲ್ಲಿಂದ ಎಲ್ಲರ ಕಣ್ಣು ಜ್ಯೋತಿ ರೈ ಮೇಲೆ ಬೀಳೋಕೆ ಶುರುವಾಯ್ತು. ಈಗ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೋ ಫೋಟೋಗಳು ಹೊರ ಬಂದಿವೆ. ಇದನ್ನ ನೋಡಿದ ಬಳಿಕ ಜ್ಯೋತಿ ರೈ ತಮ್ಮದೇ ಇನ್ಸ್ಟಾಗ್ರಾಂನಲ್ಲಿ ಎರಡನೇ ಪತಿ ಸುಕು ಪೂರ್ವಜ್ಜತೆಗಿನ ಫೋಟೋ ಶೇರ್ಮಾಡಿ ಹಾರ್ಟ್ಎಮೋಜಿ ಹಾಕಿದ್ದಾರೆ. ಇದರ ಮಧ್ಯೆ ಸಮಾಜಮುಖಿ ಕೆಲಸ ಮಾಡಿ ಸಮಾಧಾನ ಪಟ್ಟಿದ್ದಾರೆ.

Video Top Stories