ಅಬ್ಬಬ್ಬಾ..ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ 'ಸುಖ' ತೀರಿಸಲು ವರ್ಷಕ್ಕೆ 25 ವರ್ಜಿನ್ ಗರ್ಲ್ಸ್!
ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜೊಂಗ್-ಉನ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಸರ್ವಾಧಿಕಾರಿ ಕಿಮ್ ಜೊಂಗ್ –ಉನ್, ಘನ ಘೋರ ಶಿಕ್ಷೆ ನೀಡುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಶಿಕ್ಷೆ ವಿಧಾನ ಜನಸಾಮಾನ್ಯರನ್ನು ದಂಗಾಗಿಸುತ್ತದೆ. ಹೀಗಿರುವ ಈ ಸರ್ವಾಧಿಕಾರಿಯ ಬಗ್ಗೆ ಆಘಾತಕಾರಿ ಮಾಹಿತಿಯೊಂದು ಇತ್ತೀಚಿಗೆ ಹೊರಬಿದ್ದಿದೆ.
ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜೊಂಗ್-ಉನ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಸರ್ವಾಧಿಕಾರಿ ಕಿಮ್ ಜೊಂಗ್ –ಉನ್, ಘನ ಘೋರ ಶಿಕ್ಷೆ ನೀಡುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಶಿಕ್ಷೆ ವಿಧಾನ ಜನಸಾಮಾನ್ಯರನ್ನು ದಂಗಾಗಿಸುತ್ತದೆ. ಹೀಗಿರುವ ಈ ಸರ್ವಾಧಿಕಾರಿಯ ಬಗ್ಗೆ ಆಘಾತಕಾರಿ ಮಾಹಿತಿಯೊಂದು ಇತ್ತೀಚಿಗೆ ಹೊರಬಿದ್ದಿದೆ. ಉತ್ತರ ಕೊರಿಯಾದ ಯೊಮಿ ಪಾರ್ಕ್ ಎಂಬ ಯುವತಿ ಆ ದೇಶದ ಅಧ್ಯಕ್ಷ ಕಿಮ್ ಜಾಂಗ್ ಉನ್ ವಿರುದ್ಧ ಆರೋಪ ಮಾಡಿದ್ದಾರೆ. ಕಿಮ್ ಜಾಂಗ್ ಉನ್ ಪ್ರತಿ ವರ್ಷ ತನ್ನ ಸುಖಕ್ಕಾಗಿ 25 ಮಂದಿ ವರ್ಜಿನ್ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ ಎಂದು ಯೊಮಿ ಪಾರ್ಕ್ ಬಹಿರಂಗಪಡಿಸಿದ್ದಾರೆ.
ದೇಶದ ಸರ್ವೋಚ್ಚ ನಾಯಕ ಕಿಮ್ ಜೊಂಗ್-ಉನ್ ಪ್ರತಿವರ್ಷ ತನ್ನ ಪ್ಲೆಷರ್ ಸ್ಕ್ವಾಡ್ ಗೆ ಸೇರಲು 25 ಕನ್ಯೆ ಹುಡುಗಿಯರನ್ನು ಆಯ್ಕೆ ಮಾಡುತ್ತಾರೆ. ಹುಡುಗಿಯರ ಸೌಂದರ್ಯ, ರಾಜಕೀಯ ಅನುಸರಣೆಯ ಮೇಲೆ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡ ಯೂಟ್ಯೂಬರ್, ಲೇಖಕ ಮತ್ತು ಅಮೇರಿಕನ್ ಸಂಪ್ರದಾಯವಾದಿ ಕಾರ್ಯಕರ್ತ ಯೆನ್ಮಿ ಪಾರ್ಕ್ ತಿಳಿಸಿದ್ದಾರೆ.
ಉತ್ತರ ಕೋರಿಯಾ ಸರ್ವಾಧಿಕಾರಿ ಕಿಮ್ ವಿರುದ್ಧ ದಂಗೆ ಏಳಲು ಚಿಂತಿಸಿದವನಿಗೆ ಘೋರ ಶಿಕ್ಷೆ
ಕಿಮ್ ಜೊಂಗ್-ಉನ್ ಖುಷಿ ಪಡಿಸಲೆಂದೇ ಇದೆ 'ಪ್ಲೆಷರ್ ಸ್ಕ್ವಾಡ್'
ಯೆನ್ಮಿ ಪಾರ್ಕ್ ಈ ಬಗ್ಗೆ ಮಾತನಾಡಿ, ' ಕಿಮ್ ಜೊಂಗ್-ಉನ್, ಒಮ್ಮೆ ಕೆಲವು ಸುಂದರ ಹುಡುಗಿಯರನ್ನು ನೋಡಿದರೆ, ಅವರು ಮಾಡುವ ಮೊದಲ ಕೆಲಸವೆಂದರೆ ಅವರ ಕುಟುಂಬದ ಸ್ಥಿತಿಯನ್ನು ಪರಿಶೀಲಿಸುವುದು. ಅವರ ರಾಜಕೀಯ ಸ್ಥಿತಿಯನ್ನು ತಿಳಿಯುವುದು. ಅವರ ಕುಟುಂಬ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿದ್ದಾರಾ? ದಕ್ಷಿಣ ಕೊರಿಯಾದಲ್ಲಿ ಅಥವಾ ಇತರೇ ಯಾವುದಾದರೂ ದೇಶದಲ್ಲಿ ಸಂಬಂಧಿಗಳನ್ನು ಹೊಂದಿದ್ದಾರೆಯೇ ಅಂತ ಪರಿಶೀಲನೆ ನಡೆಸಿ ಯುವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ. ಈ ರೀತಿ ನಾನು ಎರಡು ಬಾರಿ ಆಯ್ಕೆಯಾದರೂ ಅನಿವಾರ್ಯಗಳಿಂದ ಹೋಗಲು ಆಗಿರಲಿಲ್ಲ ಎಂದು ಯುವತಿ ತಿಳಿಸಿದ್ದಾಳೆ.
ಕಿಮ್ ಜೊಂಗ್-ಉನ್ ಅವರ 'ಪ್ಲೆಷರ್ ಸ್ಕ್ವಾಡ್' ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ ಯೆನ್ಮಿ ಪಾರ್ಕ್, ಹುಡುಗಿಯರನ್ನು ಆಯ್ಕೆ ಮಾಡಿದ ನಂತರ ಅವರು ಕನ್ಯೆಯರು ಎಂದು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಾರೆ . ಈ ಸಂದರ್ಭದಲ್ಲಿ ದೇಹದಲ್ಲಿ ಸಣ್ಣ ಗಾಯದಂತಹ ದೋಷ ಇದ್ದರೂ ರಿಜಕ್ಟ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮಲವೇ ಗೊಬ್ಬರ, ನೀಲಿ ಜೀನ್ಸ್ ಹಾಕಂಗಿಲ್ಲ..ಈ ದೇಶದ ಕತೆ ನೋಡ್ರಣ್ಣೊ
ಪುರುಷರೊಂದಿಗೆ ಲೈಂಗಿಕವಾಗಿ ನಿಕಟವಾಗಿರಲು ಕೊಡ್ತಾರೆ ತರಬೇತಿ
ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಟೆಸ್ಟ್ನಲ್ಲಿ ಪಾಸಾದ ಕೆಲವು ಹುಡುಗಿಯರನ್ನು ಪಯೋಂಗ್ಯಾಂಗ್ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರ ವಿಶೇಷ ಕೆಲಸವು ಸರ್ವಾಧಿಕಾರಿಯ ಆಸೆಗಳನ್ನು ಪೂರೈಸುವುದಾಗಿರುತ್ತದೆ. ತಂಡವನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಬ್ಬರು ಮಸಾಜ್ನಲ್ಲಿ ತರಬೇತಿ ಪಡೆಯುತ್ತಾರೆ. ಇನ್ನು ಕೆಲವರು ಹಾಡುಗಳು ಮತ್ತು ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಮೂರನೇಯ ತಂಡ ಸರ್ವಾಧಿಕಾರಿ ಮತ್ತು ಇತರ ಪುರುಷರೊಂದಿಗೆ ಲೈಂಗಿಕವಾಗಿ ನಿಕಟವಾಗಿರಬೇಕು. ಈ ಪುರುಷರನ್ನು ಹೇಗೆ ಮೆಚ್ಚಿಸಬೇಕೆಂದು ಅವರು ಕಲಿಯಬೇಕು' ಎಂದು ಯೆನ್ನಿ ಪಾರ್ಕ್ ತಿಳಿಸಿದ್ದಾರೆ.
ವರದಿಯ ಪ್ರಕಾರ, ತಂಡದ ಹುಡುಗಿಯರಿಗೆ ಇಪ್ಪತ್ತು ವರ್ಷ ವಯಸ್ಸಾದಾಗ ಅವರ ಅಧಿಕಾರಾವಧಿಯು ಕೊನೆಗೊಳ್ಳುತ್ತದೆ. ಆ ಹುಡುಗಿಯರು ಕಿಮ್ ಜೊಂಗ್-ಉನ್ ಅಂಗರಕ್ಷಕರನ್ನು ಮದುವೆಯಾಗುತ್ತಾರೆ. ಕಿಮ್ ಜೊಂಗ್-ಉನ್ ಅವರ ತಂದೆ ಕಿಮ್ ಜೊಂಗ್-ಇಲ್ ಅವರ 1970ರ ಕಾಲದಲ್ಲಿ ಫ್ಲೆಷರ್ ಸ್ಕ್ವಾಡ್ ಹುಟ್ಟಿಕೊಂಡಿತು ಎಂದು ಯೆನ್ಮಿ ಪಾರ್ಕ್ ಬಹಿರಂಗಪಡಿಸಿದರು.